ಡೆ ವ್ರೀಸ್ ಹ್ಯೂಗೊ
1848-1935.  ಹೆಸರಾಂತ ಡಚ್ ಸಸ್ಯ ವಿe್ಞÁನಿ.  ಆಮ್‍ಸ್ಟರ್‍ಡ್ಯಾಮ್ ವಿಶ್ವವಿದ್ಯಾಲಯದಲ್ಲಿ 1877ರಲ್ಲಿ ಅಧ್ಯಾಪಕನಾಗಿ ಸೇರಿ ಮರುವರ್ಷದಲ್ಲಿಯೇ ಸಸ್ಯಶರೀರವಿe್ಞÁನದಲ್ಲಿ ಪ್ರಾಧ್ಯಾಪಕನಾದ.  ಹುಟ್ಟಿದ್ದು ನೆದರ್‍ಲ್ಯಾಂಡ್ಸ್‍ನಲ್ಲಿರುವ ಹಾರ್‍ಲೆಮ್‍ನಲ್ಲಿ, 16-2-1848ರಂದು.  ವಿದ್ಯಾಭ್ಯಾಸ ನಡೆದದ್ದು ಲೀಡನ್, ಹೈಡಲ್‍ಬರ್ಗ್ ಮತ್ತು ವುರ್ಜ್‍ಬರ್ಗ್‍ನಲ್ಲಿ.  ಸಸ್ಯಗಳಲ್ಲಿ ಕಂಡುಬರುವಂಥ ಪ್ಲಾಸ್ಮಾಲಿಸಿಸ್ ಕ್ರಿಯೆಯನ್ನು ಕುರಿತು ಈತ ಪ್ರಾಧ್ಯಾಪಕನಾದ ಆರಂಭದಲ್ಲಿಯೇ ವಿಪುಲವಾದ ಸಂಶೋಧನೆಗಳನ್ನು ನಡೆಸಿ ಅಭಿಸರಣ ಕ್ರಿಯೆಯ ಕ್ರಿಯಾವಿನ್ಯಾಸದ (ಮೆಕ್ಯಾನಿಸಮ್) ಬಗ್ಗೆ ಮಹತ್ತ್ವದ ಅಂಶಗಳನ್ನು ಪ್ರಕಟಿಸಿದ.  ಅದೇ ವೇಳೆಗೆ ತಾನಿದ್ದ ಪ್ರದೇಶದ ಬಯಲುಗಳಲ್ಲಿ ಅಲ್ಲಲ್ಲಿ ಹುಲುಸಾಗಿ ಬೆಳೆಯುತ್ತಿದ್ದ ಅಮೆರಿಕೆಯ ಸಂಜೆಮಲ್ಲಿಗೆಯಾದ ಈನೋತೀರ ಎಂಬ ಪ್ರಭೇದದ ಸಸ್ಯಸಮುದಾಯದಲ್ಲಿ ಆಗಾಗ್ಗೆ ಕಂಡುಬರುತ್ತಿದ್ದ  ಹೊಸ ಬಗೆಯ ಸಸ್ಯಪೀಳಿಗೆಗಳನ್ನು ಪರಿಶೀಲಿಸಿದ.   ಹೊಸ ಬಗೆಯವುಗಳ ಪೀಳಿಗೆ ಹೇಗೆ ಅಸ್ತಿತ್ವಕ್ಕೆ ಬಂದಿರಬಹುದೆಂಬುದರ ಬಗ್ಗೆ ಸತತವಾಗಿ ಸಂಕರ ಪ್ರಯೋಗಗಳನ್ನು ನಡೆಸಿ ಒಂದು ಹೊಸ ಸಿದ್ಧಾಂತವನ್ನು ಮನಸ್ಸಿನಲ್ಲೇ ಕಲ್ಪಿಸಿಕೊಂಡ (1900).  ಇದನ್ನು ಪ್ರಕಟಿಸುವುದಕ್ಕಿಂತ ಮುಂಚೆ ಹಿಂದಿನ ವಿe್ಞÁನಿಗಳು ಯಾರಾದರೂ ಇದೇ ಬಗೆಯ ಸಂಕರ ಪ್ರಯೋಗಗಳನ್ನು ನಡೆಸಿ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆಯೇ ಎಂದು ತಿಳಿಯಲು ಕುತೂಹಲದಿಂದ ಸಂಶೋಧನಾ ಲೇಖನಗಳನ್ನು ಅಧ್ಯಯಿಸುತ್ತಿದ್ದಾಗ ತಾನು ರೂಪಿಸಬೇಕೆಂದುಕೊಂಡಿದ್ದ ಸಿದ್ಧಾಂತವನ್ನು ಈ ಮೊದಲೇ ಪ್ರಯೋಗಗಳ ಆಧಾರದಿಂದ 1886ರಲ್ಲಿ ಆಸ್ಟ್ರಿಯದ ಪಾದ್ರಿ-ವಿe್ಞÁನಿ ಮೆಂಡಲ್ ಎಂಬಾತ ಸೂಚಿಸಿರುವುದನ್ನು ಕಂಡುಹಿಡಿದ.  ಪ್ರ್ರಾಮಾಣಿಕ ಸಸ್ಯವಿe್ಞÁನಿಯಾದ ಡೆ ವ್ರೀಸ್ ಮೆಂಡಲನ ಸಿದ್ಧಾಂತವನ್ನು ಪುನರುತ್ಥಾನಗೊಳಿಸಿದುದಲ್ಲದೆ ತಾನು ನಡೆಸಿದ ಪ್ರಯೋಗಗಳ ಫಲಿತಾಂಶವನ್ನು ಮೆಂಡಲ್ ಸಿದ್ಧಾಂತದ ಹಿನ್ನಲೆಯಲ್ಲಿ ಸಮರ್ಥವಾಗಿ ನಿರೂಪಿಸಿದ.  ಇದೇ ಸಮಯದಲ್ಲಿ ಎರಿಕ್ ಫಾನ್ ಷೆರ್ಮಾಕ್ ಮತ್ತು ಕಾರ್ಲ್‍ಕಾರೆನ್ಸ್ ಎಂಬ ವಿe್ಞÁನಿಗಳೂ ಸ್ವತಂತ್ರವಾಗಿ ಮೆಂಡಲ್ ಸಿದ್ಧಾಂತವನ್ನು ಸಮರ್ಥಿಸಿದ್ದರು.

ಡೆ ವ್ರೀಸ್ 1904ರಿಂದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಕೊಂಚ ಸಮಯ ಅಧ್ಯಾಪಕ ವೃತ್ತಿಯಲ್ಲಿದ್ದು 1918ರಲ್ಲಿ ನಿವೃತ್ತನಾದ. ಅನಂತರ ಮತ್ತೆ ಈನೋತೀರ ಸಸ್ಯಗಳಲ್ಲಿ ತನ್ನ ಸಂಶೋಧನೆಗಳನ್ನು ಮುಂದುವರಿಸಿದ.  ಈ ಸಸ್ಯಗಳಲ್ಲಿ ಕಂಡುಬರುವಂಥ ಆಕಸ್ಮಿಕ ಬದಲಾವಣೆಗಳು ಒಮ್ಮೆಗೇ ಒಂದೇ ಹಂತದಲ್ಲಿ ಉತ್ಪರಿವರ್ತನೆಗೊಂಡು ವಿಕಾಸಹೊಂದಿವೆ ಎಂಬುದು ಈತನ ಅಭಿಪ್ರಾಯ.  ಉತ್ಪರಿವರ್ತನೆಗಳ ಬಗ್ಗೆ ಹಾಗೂ ಜೀವವಿಕಾಸದಲ್ಲಿ ಅವುಗಳ ಪಾತ್ರದ ಬಗ್ಗೆ ವಿಪುಲವಾದ ಅಭ್ಯಾಸವನ್ನು ನಡೆಸಿದ.  ಜೀವಿಗಳಲ್ಲಿ ಕಂಡುಬರುವ ವಿಕಾಸವನ್ನು ಪ್ರಾಯೋಗಿಕವಾಗಿ ತೋರಿಸಿದುದರ ಶ್ರೇಯಸ್ಸು ಈತನಿಗೆ ಸಲ್ಲುತ್ತದೆ (ಹೊಸ ಬಗೆಯ ಈನೋತೀರ ಸಸ್ಯಗಳ ಉಗಮಕ್ಕೆ ಕಾರಣ-

ಕ್ರೊಮೋಸೋಮುಗಳಲ್ಲಾಗುವ ಸ್ಥಾನಾಂತರಣ ಹಾಗೂ ಸಂಲಗ್ನಗೊಂಡ ಜೀನ್ ಸಂಕೀರ್ಣದಲ್ಲಾಗುವ ಮರುಸಂಯೋಗ ಎಂಬುದು ಈಗ ತಿಳಿದಿದೆ).   1935ರ ಮೇ 21 ರಂದು ಆಮ್‍ಸ್ಟರ್‍ಡ್ಯಾಮಿನಲ್ಲಿ ಈತ ಮಡಿದ.  ಇವನು ಬರೆದ ಇಂಟ್ರಾಜೆಲ್ಲ್ಯುಲೇರ್ ಪ್ಯಾನ್‍ಜೆನಿಸಿನ್ (1889), ಡೀ ಮ್ಯುಟೇಟ್ಸಿಯೋನ್ಸ್ ಥಿಯೊರಿ (1900) ಮತ್ತು ಒಪೇರಾ ಎ ಪೆರಿಯೋಡಿಕಸ್ ಕೊಲೇಟ (1918-1927) ಎಂಬ ಪುಸ್ತಕಗಳು ಪ್ರಾಯೋಗಿಕ ವಿe್ಞÁನದಲ್ಲಿ ಉತ್ತಮ ಗ್ರಂಥಗಳೆನಿಸಿವೆ.
(ಎ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ